Ration Card Cancel: 20 ಲಕ್ಷಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳು ಕ್ಯಾನ್ಸಲ್.! ನಿಮ್ಮ ರೇಷನ್ ಕಾರ್ಡ್ ಹೆಸರು ಇದಿಯಾ, ಈ ರೀತಿ ಚೆಕ್ ಮಾಡಿ
ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಮಾಡಲು ಮುಂದಾಗಿದೆ. ಹೌದು ಸ್ನೇಹಿತರೆ ಕಾಂಗ್ರೆಸ್ ಪಕ್ಷವು ಇದೀಗ ರೇಷನ್ ಕಾರ್ಡ್ ಹೊಂದಿದವರಿಗೆ ದೊಡ್ಡ ಶಾಕ್ ನೀಡಿದೆ ಎಂದು ಹೇಳಬಹುದು ಏಕೆಂದರೆ ಸುಮಾರು 20 ಲಕ್ಷಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ ಎಂದು ಆಹಾರ ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪನವರು ಸದನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
20 ಲಕ್ಷಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳು ರದ್ದು (Ration Card Cancel).?
ಹೌದು ಸ್ನೇಹಿತರೆ ಹೊಸ ರೇಷನ್ ಕಾರ್ಡ್ ನೀಡುವುದರ ಬಗ್ಗೆ ಕೆಎಚ್ ಮುನಿಯಪ್ಪನವರಿಗೆ ವಿಪಕ್ಷ ನಾಯಕ ಆರ್ ಅಶೋಕ್ ಅವರು ಪ್ರಶ್ನೆ ಕೇಳಿದರು ಇದಕ್ಕೆ ಉತ್ತರ ಅವರು ಕೇಂದ್ರ ಸರ್ಕಾರ ನಿಗದಿ ಮಾಡಿರುವಂತ ಮಾನದಂಡಗಳನ್ನು ಪಾಲಿಸಿದೆ ಇರುವ ಸುಮಾರು 20 ಲಕ್ಷಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳನ್ನು ಈಗಾಗಲೇ ಗುರುತಿಸಲಾಗಿದೆ ಅಂತ ರೇಷನ್ ಕಾರ್ಡ್ ಗಳನ್ನು ಶೀಘ್ರದಲ್ಲೇ ರದ್ದು ಮಾಡಿ ಹೊಸ ರೇಷನ್ ಕಾರ್ಡ್ ವಿತರಣೆ ಬಗ್ಗೆ ಮಾಹಿತಿ ನೀಡಿದ್ದಾರೆ

ರಾಜ್ಯ ಸರ್ಕಾರ ಇದೇ ರೀತಿ ಬಿಪಿಎಲ್ ರೇಷನ್ ಕಾರ್ಡ್ ಗಳ ರದ್ದತಿಗೆ ಮುಂದಾದಾಗ ಜನರಿಂದ ತೀವ್ರ ಆಕ್ರೋಶ ಅವರ ಹಾಕಲಾಯಿತು ಮತ್ತು ಸಾಕಷ್ಟು ಪ್ರತಿಭಟನೆಗಳು ಮಾಡಲಾಯಿತು ಇದರಿಂದ ರಾಜ್ಯ ಸರ್ಕಾರ ರೇಷನ್ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಯಿತು ಆದರೆ ಇದೀಗ ಕೆಎಚ್ ಮುನಿಯಪ್ಪನವರು ಮಾಹಿತಿ ತಿಳಿಸಿರುವ ಪ್ರಕಾರ ಇನ್ನು ಎರಡು ತಿಂಗಳಲ್ಲಿ ಈ ರೇಷನ್ ಕಾರ್ಡ್ ಪರಿಷ್ಕರಣೆ ಮಾಡಲು ಆಹಾರ ಇಲಾಖೆಗೆ ಮಾಹಿತಿ ತಿಳಿಸಲಾಗಿದೆ ಎಂದು ಹೇಳಿದ್ದಾರೆ
ಹಾಗಾಗಿ ಇನ್ನು ಎರಡು ತಿಂಗಳಲ್ಲಿ ಅರ್ಹತೆ ಹೊಂದಿಲ್ಲದಂತ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿ ಆ ರೇಷನ್ ಕಾರ್ಡ್ ಗಳನ್ನು ಎಪಿಎಲ್ ರೇಷನ್ ಕಾರ್ಡ್ ಹಾಗೆ ಮಾರ್ಪಾಡು ಮಾಡಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ.
ಮುಂದುವರೆದು ನಮ್ಮ ಆಹಾರ ಇಲಾಖೆ ವರದಿಯ ಪ್ರಕಾರ ನಮ್ಮ ಕರ್ನಾಟಕದಲ್ಲಿ 1.10 ಕೋಟಿ ಬಿಪಿಎಲ್ ಕುಟುಂಬದಾರರು ಇದ್ದಾರೆ ಎಂದು ಗುರುತಿಸಿದ್ದಾರೆ ಹಾಗೂ ಇದರಲ್ಲಿ ಸುಮಾರು 20 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳು ಅಕ್ರಮವಾಗಿ ಹಾಗೂ ಸುಳ್ಳು ದಾಖಲಾತಿಗಳನ್ನು ನೀಡಿ ರೇಷನ್ ಕಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ ಎಂದು ಮಾಹಿತಿ ತಿಳಿಸಿದ್ದಾರೆ.
ಆದ್ದರಿಂದ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪರಿಷ್ಕರಣೆ ಮಾಡುವ ಪ್ರಕ್ರಿಯೆ ಮಾಡಲಾಗುತ್ತಿದ್ದು ಕೇಂದ್ರ ಸರ್ಕಾರ ನಿಗದಿ ಮಾಡಿರುವಂತ ಅರ್ಹತಾ ಮಾನದಂಡಗಳನ್ನು ಹೊಂದಿರುವಂತ ರೇಷನ್ ಕಾರ್ಡ್ ಗಳನ್ನು ಮಾತ್ರ ಉಳಿಸಿ ಉಳಿದ ಅನರ್ಹ್ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಆಹಾರ ಇಲಾಖೆಗೆ ಆದೇಶ ನೀಡಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ
ಹೊಸ ರೇಷನ್ ಕಾರ್ಡ್ ಯಾವಾಗ ವಿತರಣೆ (Ration Card Cancel).?
ಕೆಎಚ್ ಮುನಿಯಪ್ಪನವರು ಮಾಹಿತಿ ತಿಳಿಸಿರುವ ಪ್ರಕಾರ ಶೀಘ್ರದಲ್ಲೇ ಅಂದರೆ ಇನ್ನೂ ಎರಡು ತಿಂಗಳ ಒಳಗಡೆಯಾಗಿ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಲು ಸರಕಾರ ಮುಂದಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.! ಹೌದು ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಸುಮಾರು 2.95 ಲಕ್ಷ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಹಾಕಲಾಗಿದ್ದು ಇದರಲ್ಲಿ ಈಗಾಗಲೇ 1,95,000 ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ವಿತರಿಸಲಾಗಿದೆ ಹಾಗೂ ಉಳಿದ 91000 ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡುವ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ಕೊಂಡಿದ್ದಾರೆ ಹಾಗಾಗಿ ಇದು ಹೊಸ ರೇಷನ್ ಕಾರ್ಡ್ ಪಡೆಯುವವರಿಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು
ಕ್ಯಾನ್ಸಲ್ ರೇಷನ್ ಕಾರ್ಡ್ ಪಟ್ಟಿ ಚೆಕ್ ಮಾಡುವುದು ಹೇಗೆ (Ration Card Cancel).?
- ಹೌದು ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲಾಗಿದೆ ಅಥವಾ ಇಲ್ಲವ ಎಂಬ ಮಾಹಿತಿಯನ್ನು ನೀವು ತಿಳಿಯಲು ಬಯಸುತ್ತಿದ್ದರೆ ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
- ನಂತರ ಎಡಭಾಗದಲ್ಲಿ ಕಾಣುವ ಮೂರು ಅಡ್ಡ ಗೆರೆಯ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಈ ಸರ್ವಿಸ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ಅಲ್ಲಿ ತಡೆಹಿಡಿಯಲಾದ ಅಥವಾ ರದ್ದಾದ ರೇಷನ್ ಕಾರ್ಡ್ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ನಿಮ್ಮ ಜಿಲ್ಲೆ ಹಾಗೂ ತಾಲೂಕು ಮತ್ತು ಹೋಬಳಿ ಹಾಗೂ ನಿಮ್ಮ ಗ್ರಾಮ ಆಯ್ಕೆ ಮಾಡಲು ಕೇಳುತ್ತದೆ ಅಲ್ಲಿ ಎಲ್ಲಾ ವಿವರಗಳನ್ನು ಸರಿಯಾಗಿ ನಮೂದಿಸಿ
- ನಂತರ ಇಲ್ಲಿವರೆಗೂ ನಿಮ್ಮ ಗ್ರಾಮದಲ್ಲಿ ರದ್ದಾಗಿರುವ ರೇಷನ್ ಕಾರ್ಡ್ ಗಳ ವಿವರ ನೋಡಲು ಸಿಗುತ್ತದೆ ಅಲ್ಲಿ ನಿಮ್ಮ ರೇಷನ್ ಕಾರ್ಡ್ ಹೆಸರು ಇದೆಯಾ ಇಲ್ಲವಾ ಎಂಬ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು
ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ವಿವಿಧ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ನಮ್ಮ ಕರ್ನಾಟಕದಲ್ಲಿ ಖಾಲಿ ಇರುವ ವಿವಿಧ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಜಾಯಿನ್ ಆಗಬಹುದು ಇದರಿಂದ ಪ್ರತಿದಿನ ಹೊಸ ಮಾಹಿತಿಗಳು ಸಿಗುತ್ತವೆ