indian Army Recruitment: ಭಾರತೀಯ ಸೇನೆ ಸೇರಲು ಸುವರ್ಣ ಅವಕಾಶ.! ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ತಕ್ಷಣ ಅರ್ಜಿ ಸಲ್ಲಿಸಿ
ನಮಸ್ಕಾರ ಸ್ನೇಹಿತರೆ ನೀವು ಭಾರತೀಯ ಸೇನೆ ಸೇರಲು ಬಯಸುತ್ತಿದ್ದೀರಾ ಹಾಗಾದರೆ ನಿಮಗೆ ಇದು ಸುವರ್ಣ ಅವಕಾಶ ಮತ್ತು ಭಾರತೀಯ ಸೇನೆ ಸೇರಲು ನೀವು ಕನಿಷ್ಠ 8ನೇ ತರಗತಿ ಹಾಗೂ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಹಾಗೂ ಐಟಿಐ ಪಾಸಾದರೆ ಸಾಕು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗಾಗಿ ಈ ಒಂದು ಲೇಖನ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ವಿವರಗಳ ಬಗ್ಗೆ ಮಾಹಿತಿ ತಿಳಿಯೋಣ
ತಿಂಗಳಿಗೆ 35 ಸಾವಿರದವರೆಗೆ ಸಂಬಳ, 10ನೇ ತರಗತಿ ಪಾಸಾದವರು ಈ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿ ಇಲ್ಲಿದೆ ವಿವರ
ಅಗ್ನಿವೀರ್ ಹುದ್ದೆಗಳಿಗೆ ನೇಮಕಾತಿ(indian Army Recruitment)..?
ಹೌದು ಸ್ನೇಹಿತರೆ ನಮ್ಮ ಭಾರತೀಯ ಸೇನೆಯಲ್ಲಿ ಖಾಲಿ ಇರುವಂತ ವಿವಿಧ ಅಗ್ನಿವೀರ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು ಅಧಿಸೂಚನೆ ಪ್ರಕಾರ ಯುವಕ ಮತ್ತು ಯುವತಿಯರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗಾಗಿ ನೀವು ಭಾರತೀಯ ಸೇನೆ ಸೇರಲು ಬಯಸುತ್ತಿದ್ದರೆ ಇದು ನಿಮಗೆ ಸುವರ್ಣ ಅವಕಾಶ ಎಂದು ಹೇಳಬಹುದು

ಭಾರತೀಯ ಸೇನೆ ಬಿಡುಗಡೆ ಮಾಡಿರುವ ಅಗ್ನಿವೀರ್ ಹುದ್ದೆಗಳ ಅಧಿಕೃತ ಅಧಿಸೂಚನೆಯ ಪ್ರಕಾರ ಜನರಲ್ ಡ್ಯೂಟಿ, ಅಗ್ನಿವೀರ್ ಕ್ಲರ್ಕ್/ ಸ್ಟೋರ್ ಕೀಪರ್, ಟೆಕ್ನಿಕಲ್, ಟ್ರೇಡ್ರ್ ಮ್ಯಾನ್, ನರ್ಸಿಂಗ್ ಹಾಗೂ ಸೈನಿಕ ಟೆಕ್ನಿಕಲ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಇದೀಗ ಬಿಡುಗಡೆ ಮಾಡಲಾಗಿದೆ
ಹೌದು ಸ್ನೇಹಿತರೆ ಇದೀಗ ಭಾರತೀಯ ಸೇನೆಯಲ್ಲಿ ಖಾಲಿ ಅಗ್ನಿವೀರ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ ಈ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಮತ್ತು ಆಯ್ಕೆಯ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಜಿ ಶುಲ್ಕ ಹಾಗೂ ಇತರ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ
ಹುದ್ದೆಗಳ ನೇಮಕಾತಿ ವಿವರ (indian Army Recruitment).?
ನೇಮಕಾತಿ ಇಲಾಖೆ:- ಇಂಡಿಯನ್ ಆರ್ಮಿ ಅಗ್ನಿವೀರ್
ಉದ್ಯೋಗ ಸ್ಥಳ:- ಭಾರತ
ಖಾಲಿ ಹುದ್ದೆಗಳ ಸಂಖ್ಯೆ:- ಸೇನೆ ನಿಖರವಾಗಿ ಹೇಳಿಲ್ಲ
ಅರ್ಜಿ ಪ್ರಾರಂಭ ದಿನಾಂಕ:- 12/03/2025
ಅರ್ಜಿ ಕೊನೆಯ ದಿನಾಂಕ:- 10/04/2025
ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ
ವಯೋಮಿತಿ:- 17-21 ವರ್ಷ
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (indian Army Recruitment).?
ಶೈಕ್ಷಣಿಕ ಅರ್ಹತೆ:- ಭಾರತೀಯ ಸೇನೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಈ ಅಗ್ನಿವೀರ್ ಅಧಿಕೃತ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಹುದ್ದೆಗಳ ಅನುಗುಣವಾಗಿ 8ನೇ ತರಗತಿ ಹಾಗೂ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಹಾಗೂ ಐ ಟಿ ಐ ಪಾಸ್ ಆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
ವಯೋಮಿತಿ ಎಷ್ಟು:- ಭಾರತೀಯ ಸೇನೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಈ ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರ ವಯಸ್ಸು ಕನಿಷ್ಠ 17 ವರ್ಷ ಹಾಗೂ ಗರಿಷ್ಠ 21 ವರ್ಷ ವಯೋಮಿತಿ ಹೊಂದಿರಬೇಕು ಮತ್ತು ಮೀಸಲಾತಿ ಆಧಾರದ ಮೇಲೆ ವಯೋಮಿತಿ ಸಡಲಿಕ್ಕೆ ನೀಡಲಾಗಿದೆ
ಸಂಬಳ ಎಷ್ಟು:– ಭಾರತೀಯ ಸೇನೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಈ ಅಗ್ನಿವೀರ್ ಹುದ್ದೆಗಳಿಗೆ ಆಯ್ಕೆಯಾದಂತ ಅಭ್ಯರ್ಥಿಗಳಿಗೆ ಮೊದಲ ವರ್ಷ 30,000 ರೂಪಾಯಿ ಹಾಗೂ 2ನೇ ವರ್ಷ 33,000 ಮತ್ತು 3ನೇ ವರ್ಷ 36,000 ಹಾಗೂ 4ನೇ ವರ್ಷ 40,000 ಸಂಬಳ ನೀಡಲಾಗುತ್ತದೆ
ಅರ್ಜಿ ಶುಲ್ಕ ಎಷ್ಟು ಮತ್ತು ಆಯ್ಕೆ ವಿಧಾನ:- ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 250 ರೂಪಾಯಿ ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ ಇದರ ಜೊತೆಗೆ ಜಿ ಎಸ್ ಟಿ ಪಾವತಿ ಮಾಡಬೇಕು ಹಾಗೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ ನಂತರ ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ಮತ್ತು ಇತರ ವಿಧಾನಗಳನ್ನು ಆಧರಿಸಿ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ
ಅರ್ಜಿ ಸಲ್ಲಿಸುವುದು ಹೇಗೆ (indian Army Recruitment).?
ಭಾರತೀಯ ಸೇನೆ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯ ಪ್ರಕಾರ ಈ ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗಾಗಿ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಮೊದಲು ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ನಂತರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
https://www.joinindianarmy.nic.in/
ಇದೇ ರೀತಿ ನಿಮಗೆ ಸರಕಾರದ ಉದ್ಯೋಗಗಳ ಬಗ್ಗೆ ಮಾಹಿತಿ ಹಾಗೂ ಪ್ರೈವೇಟ್ ಕಂಪನಿಗಳಲ್ಲಿ ಖಾಲಿ ಇರುವ ಉದ್ಯೋಗಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಮಾಹಿತಿ ಪಡೆಯಲು ಬಯಸುತ್ತಿದ್ದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು ಇದರಿಂದ ನಿಮಗೆ ಪ್ರತಿದಿನ ಹೊಸ ಮಾಹಿತಿಗಳು ತಕ್ಷಣ ಸಿಗುತ್ತವೆ
1 thought on “indian Army Recruitment: ಭಾರತೀಯ ಸೇನೆ ಸೇರಲು ಸುವರ್ಣ ಅವಕಾಶ.! ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ತಕ್ಷಣ ಅರ್ಜಿ ಸಲ್ಲಿಸಿ”