Gruhalakshmi 17Th Installment: ಗೃಹಲಕ್ಷ್ಮಿ ಫೆಬ್ರುವರಿ ತಿಂಗಳ 2000/- & ಪೆಂಡಿಂಗ್ ಹಣ ಜಮಾ.! ಸ್ಟೇಟಸ್ ಈ ರೀತಿ ಚೆಕ್ ಮಾಡಿಕೊಳ್ಳಿ
ನಮಸ್ಕಾರ ಸ್ನೇಹಿತರೆ ನಮ್ಮ ರಾಜ್ಯದ ಮಹತ್ವದ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ ಯಾಗಿದೆ ಈ ಯೋಜನೆಯಿಂದ ಲಕ್ಷಾಂತರ ಜನರು ಪ್ರತಿ ತಿಂಗಳು 2000 ಹಣ ಪಡೆಯುತ್ತಿದ್ದಾರೆ, ಆದ್ದರಿಂದ ಸಾಕಷ್ಟು ಜನರು ಈ ಯೋಜನೆ ಲಾಭ ಪಡೆಯುತ್ತಿದ್ದಾರೆ ಎಂದು ಹೇಳಬಹುದು ಹಾಗಾಗಿ ಈ ಒಂದು ಲೇಖನ ಮೂಲಕ ಫೆಬ್ರವರಿ ತಿಂಗಳ 2000 ಹಣ ಹಾಗೂ ಪೆಂಡಿಂಗ್ ಇರುವಂತಹ ಹಣ ಜಮಾ ಮಾಡುವುದರ ಬಗ್ಗೆ ಮಾಹಿತಿ ಹಾಗೂ ಹಣ ಜಮಾದ ಮಾಹಿತಿ ಚೆಕ್ ಮಾಡುವುದು ಹೇಗೆ ಎಂಬ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ
ಮುದ್ರಾ ಲೋನ್ ಯೋಜನೆ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ಸಾಲ ಪಡೆಯಿರಿ ತಕ್ಷಣ ಈ ರೀತಿ ಅರ್ಜಿ ಸಲ್ಲಿಸಿ
ಗೃಹಲಕ್ಷ್ಮಿ ಯೋಜನೆ (Gruhalakshmi 17Th Installment)..?
ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಈ ಗೃಹಲಕ್ಷ್ಮಿ ಯೋಜನೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದ್ದು ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡುವುದಾಗಿ ಭರವಸೆ ನೀಡಿದೆ ಈ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯ ಕೂಡ ಒಂದಾಗಿದೆ ಎಂದು ಹೇಳಬಹುದು ಮತ್ತು ಈ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ

ಹೌದು ಸ್ನೇಹಿತರೆ ಈ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಇಲ್ಲಿವರೆಗೂ ಮಹಿಳೆಯರು ಸುಮಾರು 16 ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ ಅಂದರೆ ಈ ಯೋಜನೆ ಅಡಿಯಲ್ಲಿ ಸುಮಾರು 32,000 ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ ಮತ್ತು ಕೆಲ ಮಹಿಳೆಯರ ಖಾತೆಗೆ ಇನ್ನೂ ಎರಡರಿಂದ ಮೂರು ಕಂತಿನ ಹಣ ಬಾಕಿ ಇದ್ದು ಯಾವಾಗ ಹಣ ಜಮಾ ಆಗುತ್ತದೆ ಎಂದು ಕಾಯುತ್ತಿದ್ದಾರೆ ಅಂತ ಮಹಿಳೆಯರಿಗೆ ಇದೀಗ ಸಿಹಿ ಸುದ್ದಿ
ಗೃಹಲಕ್ಷ್ಮಿ ಯೋಜನೆಯ 17ನೇ ಕಂತಿನ ಹಣ & ಪೆಂಡಿಂಗ್ 4,000 ಹಣ ಬಿಡುಗಡೆ (Gruhalakshmi 17Th Installment).?
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಕೆಲ ಮಹಿಳೆಯರಿಗೆ ಎರಡರಿಂದ ಮೂರು ಕಂತಿನ ಹಣ ಬಾಕಿ ಇದೆ ಅಂತ ಮಹಿಳೆಯರಿಗೆ ಈ ತಿಂಗಳು ಅಂದರೆ ಮಾರ್ಚ್ 10ನೇ ತಾರೀಕು 2000 ಹಣ ಜಮಾ ಮಾಡಲಾಗಿದೆ ಮಾರ್ಚ್ 12ನೇ ತಾರೀಕು 2,000 ಹಣ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ ಅಂದರೆ ಡಿಸೆಂಬರ್ ಹಾಗೂ ಜನವರಿ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಮಾಡಲಾಗಿದ್ದು ಇಲ್ಲಿವರೆಗೂ ಮಹಿಳೆಯರು ಸುಮಾರು 16ನೇ ಕಂತಿನ ಹಣದವರೆಗೆ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು
ಮತ್ತು ಗೃಹಲಕ್ಷ್ಮಿ ಯೋಜನೆಯ ಫೆಬ್ರುವರಿ ತಿಂಗಳ ಹಣವನ್ನು ಈ 25ನೇ ತಾರೀಖಿನ ಒಳಗಡೆ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ಹಂಚಿಕೊಂಡಿದ್ದಾರೆ ಹಾಗಾಗಿ ನೀವು ನಿಮಗೆ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಮಾಹಿತಿಯನ್ನು ಯಾವ ರೀತಿ ಚೆಕ್ ಮಾಡುವುದು ಎಂದು ನಾವು ಕೆಳಗಡೆ ತಿಳಿಸಿದ್ದೇವೆ
ಹಣ ಜಮಾ ಆಗದೇ ಇದ್ದರೆ ಕೂಡಲೇ ಈ ಕೆಲಸ ಮಾಡಿ (Gruhalakshmi 17Th Installment).?
ಹೌದು ಸ್ನೇಹಿತರೆ ಸಾಕಷ್ಟು ಮಹಿಳೆಯರ ಖಾತೆಗೆ ಇನ್ನೂ ಎರಡು ಹಾಗೂ ಮೂರು ಕಂತಿನ ಹಣ ಜಮಾ ಆಗಿಲ್ಲ ಅಂತ ಮಹಿಳೆಯರು ಕೂಡಲೇ ಕೆಳಗೆ ತಿಳಿಸಿದ ಕೆಲಸವನ್ನು ಮಾಡಿ
- ಗೃಹಲಕ್ಷ್ಮಿ ಅರ್ಜಿ ಹಾಕಿದ ಮಹಿಳೆಯ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿ
- ಗೃಹಲಕ್ಷ್ಮಿ ಅರ್ಜಿ ಹಾಕಿದ ಮಹಿಳೆಯ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ & EKYC ಮಾಡಿಸಿ
- ಗೃಹಲಕ್ಷ್ಮಿ ಅರ್ಜಿ Ekyc ಮಾಡಿಸಿ
- ರೇಷನ್ ಕಾರ್ಡ್ ನಲ್ಲಿ ಇರುವ ಎಲ್ಲಾ ಸದಸ್ಯರಿಗೆ Ekyc ಮಾಡಿಸಿ
ಮೇಲೆ ತಿಳಿಸಿದ ಎಲ್ಲಾ ಕೆಲಸವನ್ನು ಮಾಡಿದರೂ ಕೂಡ ನಿಮ್ಮ ಖಾತೆಗೆ ಹಣ ಬರುತ್ತಿಲ್ಲವೆಂದರೆ ನೀವು ಕೂಡಲೇ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಅಥವಾ ಕಚೇರಿಗೆ ಭೇಟಿ ನೀಡಿ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ ಹಾಗೂ ಯಾವ ಕಾರಣಕ್ಕೆ ಹಣ ಬರುತ್ತಿಲ್ಲ ಎಂಬ ಮಾಹಿತಿಯನ್ನು ತಿಳಿಯಬಹುದು
ಗೃಹಲಕ್ಷ್ಮಿ ಹಣ ಜಮಾ ಆದ ಮಾಹಿತಿ ಚೆಕ್ ಮಾಡುವುದು ಹೇಗೆ (Gruhalakshmi 17Th Installment).?
- ಮೊದಲು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಪ್ಲೇ ಸ್ಟೋರ್ ಅಪ್ಲಿಕೇಶನ್ ಗೆ ಭೇಟಿ ನೀಡಿ DBT ಕರ್ನಾಟಕ ಎಂಬ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ
- ನಂತರ ಗೃಹಲಕ್ಷ್ಮಿ ಅರ್ಜಿ ಹಾಕಿದ ಮಹಿಳೆಯ ಆಧಾರ್ ನಂಬರ್ ಎಂಟರ್ ಮಾಡಿ ವಿವರಗಳನ್ನು ಭರ್ತಿ ಮಾಡಿ ನಂತರ ಆಧಾರ್ ಕಾರ್ಡ್ ಗೆ ಲಿಂಕ್ ಇದ್ದ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ
- ಅದನ್ನು ಎಂಟರ್ ಮಾಡಿ ಈ ಒಂದು ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಈ ಅಪ್ಲಿಕೇಶನ್ ಓಪನ್ ಮಾಡಿ
- ಅಲ್ಲಿ ನಿಮಗೆ ನಾಲ್ಕು ರೀತಿಯ ಆಯ್ಕೆಗಳು ಕಾಣುತ್ತವೆ ಅಲ್ಲಿ ನೀವು ಪೇಮೆಂಟ್ ಸ್ಟೇಟಸ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ನಂತರ ಗೃಹಲಕ್ಷ್ಮಿ ಯೋಜನೆ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ಇಲ್ಲಿವರೆಗೂ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನಿಮಗೆ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಸಂಪೂರ್ಣ ವಿವರ ಈ ಒಂದು ಅಪ್ಲಿಕೇಶನ್ ಮೂಲಕ ಸಿಗುತ್ತದೆ
ಸ್ನೇಹಿತರೆ ಇದೇ ರೀತಿ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಇತರ ವಿಷಯಗಳಿಗೆ ಸಂಬಂಧಿಸಿದಂತೆ ನೀವು ಪ್ರತಿದಿನ ಮಾಹಿತಿ ಪಡೆಯಲು ಬಯಸುತ್ತಿದ್ದರೆ ಮೊದಲು ನೀವು ನಮ್ಮ ಟೆಲಿಗ್ರಾಂ ಚಾನೆಲ್ ಹಾಗೂ ವಾಟ್ಸಪ್ ಚಾನಲ್ಗಳಿಗೆ ಸೇರಿಕೊಳ್ಳಿ ಇದರಿಂದ ಪ್ರತಿದಿನ ಹೊಸ ಮಾಹಿತಿಗಳು ಸಿಗುತ್ತವೆ