Gruhalakshmi scheme: 2 ತಿಂಗಳ ಹಣ ಬಿಡುಗಡೆಯ ಬಗ್ಗೆ ಹೊಸ ಅಪ್ಡೇಟ್.! ಈ ದಿನ ಜಮಾ ಆಗಲಿದೆ 4000 ಹಣ
ನಮಸ್ಕಾರ ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಬಿಡುಗಡೆಯ ಬಗ್ಗೆ ರಾಜ್ಯ ಸರ್ಕಾರ ಕಡೆಯಿಂದ ಹೊಸ ಅಪ್ಡೇಟ್ ನೀಡಲಾಗಿದೆ.! ಹೌದು ಸ್ನೇಹಿತರೆ ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗುತ್ತಿಲ್ಲ ಈ ಬೆನ್ನಲ್ಲೇ ತೀವ್ರವಾಗಿ ವಿಪಕ್ಷಗಳ ನಾಯಕರು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹತ್ವದ ಅಪ್ಡೇಟ್ ನೀಡಿದ್ದಾರೆ.!
ಗೃಹಲಕ್ಷ್ಮಿ ಜನವರಿ ಮತ್ತು ಫೆಬ್ರವರಿ ತಿಂಗಳ ಹಣ ಬಿಡುಗಡೆ (Gruhalakshmi scheme).?
ಗೃಹಲಕ್ಷ್ಮಿ 15ನೇ ಕಂತಿನ ಹಣ ಮಹಿಳೆಯರ ಖಾತೆಗೆ ಈಗಾಗಲೇ ಜಮಾ ಆಗಿದೆ ಮತ್ತು ಕೆಲ ಮಹಿಳೆಯರ ಖಾತೆಗೆ 16ನೇ ಕಂತಿನ ಹಣವು ಕೂಡ ಜಮಾ ಆಗಿದ್ದು ಇನ್ನು ಫೆಬ್ರವರಿ ತಿಂಗಳ 17ನೇ ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಹಾಗಾಗಿ ಈ ಬಗ್ಗೆ ಬಿಜೆಪಿಯ ವಿಪಕ್ಷ ನಾಯಕ್ ಆರ್ ಅಶೋಕ್ ಅವರು ಸದನದಲ್ಲಿ ಈ ಪ್ರಶ್ನೆ ಕೇಳಿದರು.? ಗೃಹಲಕ್ಷ್ಮಿ ಹಣ ಯಾವಾಗ ಮಹಿಳೆಯರ ಖಾತೆಗೆ ಹಣ ಜಮಾ ಮಾಡುತ್ತಿರಿ ಹಾಗೂ ಹಣ ಜಮಾ ಮಾಡಲು ಏಕೆ ವಿಳಂಬ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಕೇಳಿದ್ದಾರೆ

ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಳ್ಕರ್ ಹಾಗೂ ಕಾರ್ಮಿಕ ಇಲಾಖೆಯ ಸಚಿವ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.!
ಹೌದು ಸ್ನೇಹಿತರೆ ಸಚಿವರು ಉತ್ತರಿಸಿದ ಪ್ರಕಾರ ಮಹಿಳೆಯರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು.! ಏಕೆಂದರೆ ಗೃಹಲಕ್ಷ್ಮಿ ಜನವರಿ ಮತ್ತು ಫೆಬ್ರವರಿ ತಿಂಗಳ ಎರಡು ಕಂತಿನ ಹಣ ಒಟ್ಟಿಗೆ 4000 ಮಹಿಳೆಯರ ಖಾತೆಗೆ ಮಾರ್ಚ್ 31ರ ಒಳಗಡೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ
ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸುವ ಮಾಹಿತಿ ಪ್ರಕಾರ ಈಗಾಗಲೇ ಹಣ ಬಿಡುಗಡೆಯ ಪ್ರಕ್ರಿಯೆ ಆರಂಭವಾಗಿದೆ ಪ್ರತಿದಿನ ಒಂದಿಷ್ಟು ಮಹಿಳೆಯರ ಖಾತೆಗೆ ಜನವರಿ ಮತ್ತು ಫೆಬ್ರವರಿ ತಿಂಗಳ ಹಣ ಜಮಾ ಮಾಡುತ್ತಿದ್ದೇವೆ ಎಂದು ಮಾಧ್ಯಮಗಳ ಮುಂದೆ ಮಾಹಿತಿ ತಿಳಿಸಿದ್ದಾರೆ.! ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳ ಮುಂದೆ ಗೃಹಲಕ್ಷ್ಮಿ ಯೋಜನೆಯಲ್ಲಿ ನೀಡುತ್ತಿರುವಂತಹ ಎಲ್ಲಾ ಕಂತಿನ ಹಣವನ್ನು ಹಾಗೂ ಯಾವುದೇ ಪೆಂಡಿಂಗ್ ಹಣವನ್ನು ನಾವು ಉಳಿಸಿಕೊಳ್ಳುವುದಿಲ್ಲ ಎಲ್ಲಾ ಮಹಿಳೆಯರ ಖಾತೆಗೆ ಕಡ್ಡಾಯವಾಗಿ ನಾವು ಜಮಾ ಮಾಡುತ್ತೇವೆ ಎಂದು ಮಾಹಿತಿ ತಿಳಿಸಿದ್ದಾರೆ
ಈ ಹಣ ಜಮಾ ಮಾಡಲು ಇನ್ನು ಹತ್ತು ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ ಹಾಗಾಗಿ ಅಲ್ಲಿವರೆಗೂ ಮಹಿಳೆಯರು ತಾಳ್ಮೆಯಿಂದ ಕಾಯಬೇಕು ಹಾಗೂ ಕೆಲ ಮಹಿಳೆಯರಿಗೆ ಹಣ ಜಮಾ ಆಗಲು ಬ್ಯಾಂಕ್ ಖಾತೆ ಸರಿಯಾಗಿರುವುದಿಲ್ಲ ಮತ್ತು ಕೆಲವೊಂದು ರೂಲ್ಸ್ ಪಾಲಿಸುತ್ತಿಲ್ಲ ಅಂತವರಿಗೆ ಹಣ ಜಮಾ ಮಾಡಲು ವಿಳಂಬವಾಗುತ್ತಿದೆ ಎಂದು ಮಾಹಿತಿ ತಿಳಿಸಿದ್ದಾರೆ
ಪೆಂಡಿಂಗ್ ಇರುವಂತಹ ಹಣ ಪಡೆಯಲು ಏನು ಮಾಡಬೇಕು (Gruhalakshmi scheme).?
ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣ ನೀವು ಪಡೆದುಕೊಳ್ಳಬೇಕಾದರೆ ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಜೋಡಣೆ ಹಾಗೂ ಆಧಾರ್ ಕಾರ್ಡ್ ಸೀಡಿಂಗ್ ಮತ್ತು ಬ್ಯಾಂಕ್ ಖಾತೆಗೆ ಸಂಬಂಧಿಸಿದ ಈಕೆ ವೈಸಿ ಪೂರ್ಣಗೊಳಿಸಿರಬೇಕು ಅಂತವರಿಗೆ ಮಾತ್ರ ಹಣ ಜಮಾ ಆಗುತ್ತೆ ಇದರ ಜೊತೆಗೆ ರೇಷನ್ ಕಾರ್ಡ್ ನಲ್ಲಿ ಇರುವಂತಹ ಕುಟುಂಬದ ಸದಸ್ಯರ ಈ ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಮತ್ತು ಗೃಹಲಕ್ಷ್ಮಿ ಅರ್ಜಿ ಈ ಕೆವೈಸಿ ಮಾಡಿಸಬೇಕು ಅಂದರೆ ಮಾತ್ರ ಹಣ ಜಮಾ ಆಗುತ್ತೆ ಎಂದು ಮಾಹಿತಿ ತಿಳಿಸಿದ್ದಾರೆ
ಒಂದು ವೇಳೆ ನಿಮಗೆ ಎಲ್ಲಾ ಸರಿಯಾಗಿದ್ದು ಹಣ ಜಮಾ ಆಗುತ್ತಿಲ್ಲ ಅಂದರೆ ನೀವು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು…!
ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ನೀವು ಪ್ರತಿದಿನ ಮಾಹಿತಿ ಪಡೆಯಲು ಬಯಸುತ್ತಿದ್ದೀರಾ ಹಾಗಾದ್ರೆ ನೀವು ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಿ
1 thought on “Gruhalakshmi scheme: 2 ತಿಂಗಳ ಹಣ ಬಿಡುಗಡೆಯ ಬಗ್ಗೆ ಹೊಸ ಅಪ್ಡೇಟ್.! ಈ ದಿನ ಜಮಾ ಆಗಲಿದೆ 4000 ಹಣ”